ಧಿಯೋ ಯೋನಃ ಪ್ರಚೋದಯಾತ್....: ಮೈಸೂರಿಗೊಂದು ಬೆಚ್ಚನೆ ಭೇಟಿ........

ಧಿಯೋ ಯೋನಃ ಪ್ರಚೋದಯಾತ್....

Monday, July 17, 2006

ಮೈಸೂರಿಗೊಂದು ಬೆಚ್ಚನೆ ಭೇಟಿ........

ಹುಡುಗರ ಉತ್ಸಾಹಗಳು ಹೇಗಿರುತ್ತವೆ ನೋಡಿ. ಗಿರಿಬಾವ "ಮೈಸೂರಿಗೆ ಹೋಪನಾ?" ಅಂದಿದ್ಡೇ ತಡ, ಹೊರಟೇಬಿಟ್ಟೆವಲ್ಲ....

ನಾನು(ಅಂದ್ರೆ ಎಲ್ಡಿ), ಗಿರಿಬಾವ, ಗಿರಿಬಟ್ಟ, ನಾಡಿಬಾಗು().... ಒಂದು ಬುಲೆಟ್ಟು ಮತ್ತೊಂದು ಯಮಹಾ. ಬಾವ-ನಾಡಿ ಬುಲೆಟ್ನಲ್ಲಿ, ನಾನು-ಗಿರಿಬಟ್ಟ ಯಮಹಾದಲ್ಲಿ... ಕಷ್ಟಪಟ್ಟು ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಹೊರಟೆವು. ಬೆಂಗಳೂರು ಊರು ಮುಗ್ದ ತಕ್ಷಣ ಗಾಡಿ ಜೋರಾಗಿ ಒಡಿಸ್ಬೇಕು ಅಂತ ಅಂದ್ಕೊಡಿದ್ವಿ. ಆದ್ರೇನು ಮಾಡೋದು? ಗಾಳೀನೇ ನಮ್ಮನ್ನ ಅಲ್ಲಾಡ್ಸೊ ಅಷ್ಟು ಜೋರಾಗಿ ಬೀಸ್ತಾ ಇತ್ತು. ರಾಮನಗರದಲ್ಲಿ ಪಗಡದಸ್ತು ಊಟ!!..... ಸಮಾ ಉಂಡ ಮೇಲೆ "ಮೈಸೂರೂ ಬ್ಯಾಡ, ಬೈಕೂ ಬ್ಯಾಡ" ಅನ್ಸಿದ್ದು ಮಾತ್ರ ನಿಜ. ರಾಮನಗರದಿಂದ ನಾನು ಯಮಹ ತಗೆದುಕೊಂಡೆ. ಒಂದೈದು ಕಿಲೋಮೀಟರ್ ಆಗ್ತಿದ್ದ ಹಾಗೇ ಬೈಕು ರುಬ್ಬುವ ಚಟ ಎದ್ದಿತು ನೋಡಿ, ಸಮಾ ಎಂಬತ್ತು ತೊಂಬತ್ರಲ್ಲಿ ರುಬ್ಬಿ ಬಿಟ್ಟೆ. ಗಾಡಿ ಬೇರೆ ತೇಲಕ್ಕೆ ಶುರು ಮಾಡ್ತು. ಗಿರಿಬಟ್ಟ ಎರಡೂ ಕೈನೂ ಮುಂದಕ್ಕೆ ಚಾಚಿ, "ಬ್ಯಾಡಲೇ ಬಟ್ಟಾ ತೇಲ್ತಾ ಇದ್ದು" ಅಂದಿದ್ದು ಇನ್ನೂ ನಗು ತರಿಸುತ್ತಿದೆ. ಮಂಡ್ಯದ ಹತ್ತಿರ ಗಿರಿಬಟ್ಟ ಗಾಡಿ ತಗಂಡ. ಮೈಸೂರು ಗೇಟ್ ದಾಟ್ತಿದ್ದ ಹಾಗೆ ಹೊಂಡ ಆಕ್ಟಿವಾ ಮೇಲೆ ಹೊಗ್ತಿದ್ದ ಜೋಡಿ ಕಾಣಿಸ್ತು. ಗಿರಿಬಟ್ಟ ಗುಮ್ಮನೆ ಪಕ್ಕದಲ್ಲಿ ಹಾದು ಹೋದ ನೊಡಿ, ಆ ಜೊಡಿ(ಅದ್ರಲ್ಲೂ ಆ ಹುಡುಗಿ) ಹಂಗೇ ಕಂಗಾಲು!!.. ಮೈಸೂರಲ್ಲಿ ರೂಮ್ ಮಾಡಿ ಕಾರಂಜಿಕೆರೆ ನೋಡೋಣ ಅಂತ ಹೊರಟೆವು. ಬ್ಯಾಡ್ ಲಕ್, ಅದು ಬಂದ್ ಆಗಿತ್ತು. ಆಮೇಲೆ ಇದ್ದೇ ಇದೆಯಲ್ಲ ಚಾಮುಂಡಿ ಬೆಟ್ಟ, ನಮ್ಮ ಬೈಕುಗಳು ಅತ್ತ ಹೊರಳಿದವು. ಅಂಥಾ ತಿರುವುಗಳಲ್ಲೂ ಬೈಕು ಬೆಂಡ್ ಮಾಡೋದೇನೂ, ಹ್ಯಾಂಡ್ಲಿಂದ ಕೈ ಬಿಟ್ಟು ಸರ್ಕಸ್ಸೇನು.... ಬೆಂಡ್ ಮಾಡಿದ ಪರಿಗೆ ಸ್ಟ್ಯಾಂಡು ನೆಲಕ್ಕೆ ತಾಗಿ ಕಿದಿ ಬರ್ತಿತ್ತು. ಬೆಳಿಗ್ಗೆ ಕೆ ಆರ್ ಎಸ್ ನೋಡಕ್ಕೆ ಹೋದೆವು. ಇಟ್ ವಾಸ್ ಗುಡ್. ಎರಡು ಗಂಟೆಗೆ. ಮೈಸೂರಿಂದ ವಾಪಸ್ ಹೊರಟೆವು. ಮಂಡ್ಯದಲ್ಲಿ ಹಟ ಮಾಡಿ, ನಾಡಿಬಾಗು ಹತ್ರ ಗಾಡಿ ತೆಗೆದುಕೊಂಡೆ. ಒಂದು ಇಪ್ಪತ್ತು ಕಿಲೋಮೀಟರ್ ಕಳೀತು. ಚನ್ನಪಟ್ನದ ಹತ್ರ ಒಂದು ಆಕ್ಸಿಡೆಂಟ್ ನೋಡಿ ನನಗೆ ಕೈಕಾಲು ನಡುಗಿ, ಗಾಡಿ ಅಲ್ಲೇ ನಿಂತೊಯ್ತು !! ( ಐ ಮೀನ್, ಎಲ್ಲಾರ್ದೂ ಮೀಟರ್ ನೆಲಕ್ಕೆ!!). ಅಲ್ಲಿಂದ ನಾಡಿಬಾಗು ಗಾಡಿ ತಗಂಡ. ಅಂತೂ ಕೊನೆಗೆ ಶಿಸ್ತಾಗಿ ಮನೆಗೆ ಮುಟ್ಟಿದೆವು.

2 Comments:

At 8:48 PM, Blogger ಶ್ರೀಹರ್ಷ ನಡಹಳ್ಳಿ said...

yella ok.. Ritz vishaya illa yaake?

nice one maga.. ಸಕ್ಕತ್ ಆಗಿದೆ.. ಹಿಂಗೇ ಮುಂದುವರಿಸು.

 
At 1:09 PM, Blogger Enigma said...

:) sadya hog bekare enu aglliwalla

 

Post a Comment

<< Home