ಧಿಯೋ ಯೋನಃ ಪ್ರಚೋದಯಾತ್....: ನಾಟ್ ವರ್ಣಿಸೇಬಲ್..

ಧಿಯೋ ಯೋನಃ ಪ್ರಚೋದಯಾತ್....

Wednesday, September 05, 2007

ನಾಟ್ ವರ್ಣಿಸೇಬಲ್..

ಬುಲೆಟ್ಟು!!..
ಹತ್ತಿ ಕೂತ್ಕಳ್ಳದೊಂದೇ ಪ್ರಾಬ್ಲಮ್ಮು.. ಹೊರಟಮೇಲೆ ನೋ ಪ್ರಾಬ್ಲಂ!!
ಮೊನ್ನೆ ನಮ್ಮ ತುಂಬಳ್ಳಿ ಅಮರನ ಬುಲೆಟ್ಟು ಹೊಡೆದೆ. ಅವತ್ತು ಪ್ರಮೋದನ ಜರ್ಮನಿ ಫ್ಲೈಟ್ ಇತ್ತು. ಏರ್ ಪೋರ್ಟಿಂದ ವಾಪಸ್ ಬರ್ತಾ ನಾನು ಬೈಕ್ ತಗೋಂಡೆ. ಆಹಹಾ!! ಏನ್ ಫೀಲಿಂಗು ಅಂತೀರಿ!!.. ಬೈಕ್ ಮೇಲಲ್ಲ, ಆರಾಮ ಕುರ್ಚಿ ಮೇಲೆ ಕೂತ ಹಾಗೆ!.. ಹಿಂಬದಿ ಕೂತವರಿಗೂ ಒಳ್ಳೆ ಆರಾಮು.. ಹಿಂದುಗಡೆ, ಮುಂದುಗಡೆ ಎರಡು ಕಡೆನೂ ಒರಗಿಕೊಳ್ಳಬಹುದು (depends on who is sitting behind).. ;) ಹ್ಹೆಹ್ಹೆಹ್ಹೆ..
ಹೊರಟ ತಕ್ಷಣ ಒಂಥರಾ ಗತ್ತು ಆವರಿಸಿಕೊಳ್ಳತ್ತೆ, ನಾನೇ ರಾಜ ಅಂತ!.. ಪಕ್ಕದಲ್ಲಿ ಯಾವೊನಾದ್ರೂ ಸುಂಯ್ಯಂತ ಓವರ್‍ಟೇಕ್ ಮಾಡಿದ್ರೂ ಅವನ ಜೊತೆ ರೇಸ್ ಮಾಡ್ಬೇಕು ಅನ್ಸಲ್ಲ.. "poor fellow, ಪುಟಗೋಸಿ ವೆಹಿಕಲ್‍ನ ಅಳಿಸ್ತಿದಾನೆ.." ಅಂತ ಅವನ ಮೇಲೆ ಕರುಣೆ ಬರುತ್ತೆ..
ಹೂಂ, ತಿರುವಿನಲ್ಲಿ ಬೈಕ್ ಬೆಂಡ್ ಮಾಡೋದು ಅಂದ್ರೇನು ಅಂತ ಬುಲೆಟ್ನಲ್ಲಿ ಕಲೀಬೇಕು.. ನಮ್ ಕೆಲಸ ಬರೀ ಬೆಂಡ್ ಮಾಡೋದಷ್ಟೆ, ಬೈಕ್ ತನ್ನಿಂತಾನೇ ವಾಪಸ್ ನೆಟ್ಟಗಾಗತ್ತೆ!.. ಒಂಥರಾ secured feeling, ಬೇರೆ ಬೈಕ್‍ಗೆ ಹೋಲಿಸಿದ್ರೆ..ಮರುದಿನ ಬೆಳಿಗ್ಗೆ, ಮನೆಗೆ ಹೋಗೋಣಾಂತ ನನ್ ಬೈಕ್ ತಗೋಂಡೆ.. ಯಾವ್ದೋ ಕೆಟ್‍ಕಿಲುಬು ಹಿಡಿದ ಸೈಕಲ್ ಥರಾ ಅನಿಸ್ಬಿಡ್ತು.. ಗಿರಿಬಾವ ಹೇಳೋದು ನಿಜ, "other bikes are only bikes.. but bulet?.. its a pleasure!!"

9 Comments:

At 1:40 AM, Anonymous Anonymous said...

LD Well said.
But u tried the Thunder Bird. You should try the Bullet with the gear on the right side. I'm sure u'll re-visit the same blog after that.
As hardcore Bullet fans say "Bullet is the bike with gears on the RIGHT side, other bikes on the WRONG side".

Girish

 
At 1:57 AM, Blogger ಶ್ರೀಹರ್ಷ ನಡಹಳ್ಳಿ said...

ಎಲ್.ಡೀ. ಒಂದ್ ಡೌಟು.. ನಾಯಿ ಪ್ರಿವೆಂಶನ್ ಮೆಕ್ಯಾನಿಸಮ್ ಯೇನಾದ್ರೂ ಇದ್ದಾ ಅದ್ರಲ್ಲಿ?

 
At 3:20 AM, Blogger Ganesha Lingadahalli said...

@ girish bhat,
ನಿನ್ ಬುಲ್ಲೆಟ್ನಲ್ಲಿ ಗೇರು-ಬ್ರೇಕು ಕನ್‍ಫ್ಯೂಸ್ ಅಗೋಗ್ತು..

@ ಶ್ರೀಹರ್ಷ ನಡಹಳ್ಳಿ,
ನಾಯಿ ಓಡ್ಸಕ್ಕೆ ಒಂದ್ ಕಲ್ಲೊಗಿಯ ಮಿಷನ್ ಮಾಡ್ಸದೇ ಸೈ!! :(

 
At 1:27 AM, Blogger Sandeepa said...

nodade sai.. ond kai..

 
At 3:14 PM, Blogger Harisha - ಹರೀಶ said...

>> ನಿನ್ ಬುಲ್ಲೆಟ್ನಲ್ಲಿ ಗೇರು-ಬ್ರೇಕು ಕನ್‍ಫ್ಯೂಸ್ ಅಗೋಗ್ತು..

ಬುಲೆಟ್ ಇರದೇ ಹಂಗೆ!!

ನೀ ಹೇಳ ರೀತಿ ನೋಡಿದ್ರೆ ಹೊಡ್ದಿದ್ದು ಬುಲೆಟ್ಟಲ್ಲ, ಬರ್ದಿದ್ದು ಬುಲೆಟ್ಟು ಕಾಣ್ತು ;-)

ಅದು ಬೇರೆ ಯಾವ್ದೋ ವಡ್ ವಡ್ ವಡ್ ಸೌಂಡ್ ಬರ ಬೈಕ್ ಇದ್ದಿಕ್ಕು Enfield / Rajdoot ಥರ.. ಯಾವ್ದಕ್ಕೂ ಒಂದ್ ಸಲ confirmation ಬೇಕು...

 
At 9:59 PM, Blogger ಯಜ್ಞೇಶ್ (yajnesh) said...

ಗಣೇಶ್,

ಬುಲ್ಲೆಟ್ ಪ್ರಸಂಗ ಚೆನ್ನಾಗಿದ್ದು. ನಂಗೂ ಬುಲ್ಲೆಟ್ ಹೊಡಿಯಕೂ ಹೇಳಿ ಆಸೆ. ಆದ್ರೆ ನನ್ನ ಸೈಜಿಗೆ ಅದು ಸರಿಯಾಗ್ತಲ್ಲೆ. ಹ್ಹೆ ಹ್ಹೆ ಹ್ಹೆ.

ಹರ್ಷನ ಪ್ರಾಬ್ಲಂಗೆ ಒಂದು ಸಲ್ಯುಷನ್ ಮಾಡ್ಲಕ್ಕು. ಈಗ ತರತರದ ಹಾರ್ನಗಳು ಬತ್ತು. ನಾಯಿ ಬೊಗ್ಳೋ ಹಾರ್ನ್ ಹಾಕ್ಸಿದ್ರೆ ಹೆಂಗೆ? ಆದ್ರೆ ನಾಯಿಗಳು ಹಿಂದಿಂದ ಬೆರ್ಸಿಕಿಂಡು ಬಂದ್ರೆ ಇನ್ನು ಕಷ್ಟ.

-Yajnesh

 
At 11:20 AM, Blogger ಶ್ರೀನಿಧಿ.ಡಿ.ಎಸ್ said...

ನಮಸ್ತೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

 
At 8:04 AM, Blogger Ganesh K said...

ಬುಲೆಟ್ ಮಹಿಮೆಯನ್ನ ಸವಿಸ್ತಾರವಾಗಿ, ಮಾಹಿತಿಪೂರಿತವಾಗಿ, ರೋಚಕವಾಗಿ, ನವಿರಾಗಿ ನಿರೂಪಿಸಿದ್ದಕ್ಕೆ ಧನ್ಯವಾದಗಳು.

ಗಣೇಶ್.ಕೆ

 
At 9:18 PM, Blogger Gowtham said...

ಓಹ್, ಇಲ್ಲಿ ಎಲ್ಲ L.D. ಅಂತಲೇ ಕರಿಯದು ನಿಮ್ನ, 'ಡೀಲ್' ಅನ್ವರ್ಥ ನಾಮ ಗೊತ್ತಿಲ್ಯ ಅಂತ! ಬ್ಲಾಗ್ ಚೆನಾಗಿದ್ದು. :-)

 

Post a Comment

<< Home