ಧಿಯೋ ಯೋನಃ ಪ್ರಚೋದಯಾತ್....: ಒಂದಿಷ್ಟು ಪದ್ಯಗಳು....

ಧಿಯೋ ಯೋನಃ ಪ್ರಚೋದಯಾತ್....

Thursday, July 27, 2006

ಒಂದಿಷ್ಟು ಪದ್ಯಗಳು....

ಕಮ್ಮಾರ ಕುಟ್ಟುವನು,
ಚಮ್ಮಾರ ಹೊಲೆಯುವನು,
ಬಡಿಗಾರ ಕೆತ್ತುವನು,
ಕಲೆಗಾರ ಬ್ಲಾಗುವನು || ಸರ್ವಜ್ಞ ||


ಘೊರ್ಮಳೆಯ ರಾತ್ರಿಯೊಳ್, ಕವಿದ ಗಾಢಾಂಧಕಾರದೊಳ್,
ಮಿಣುಕುವಾ ಮೊಂಬತ್ತಿಯಾ ಬೆಳಕಿನೊಳ್,
ಬರಿ ಚಾಪೆಯ ಮೇಲ್ ಅರ್ಧ ಪವಡಿಸಿ,
ಎದುರಿಗೊಂದ್ ಕುರುಕಲು ತಿಂಡಿಯಂ ಇಟ್ಟು,
ಮದ್ಯ ಸಮುದ್ರದೊಳ್ ಲೀನವಾದೊಡೆ,
ಜೀವನವೆ ಲೇಸಾಯ್ತು || ಡೊಂಕು ತಿಮ್ಮ ||


ಒಂದು ಬೆಚ್ಚನೆ ಗೂಡಿರಲು,
ವೆಚ್ಚಕಿಷ್ಟು ಹೊನ್ನಿರಲು,
ಇಚ್ಛೆ ಅರಿವಾ ಸತಿಯಿರಲು,
ಮೆಚ್ಚಿದಾಕ್ಷಣ ಒಲಿದಿರಲು,
ಸ್ವರ್ಗ ಲೋಕದಾ ಚಿಂತೆ ಯಾಕೇಳಯ್ಯ ||

3 Comments:

At 9:21 AM, Blogger Sandeepa said...

ಹಹ್ಹಹ್ಹಾ....

ಕಲೆಗಾರ ಬ್ಲಾಗುವನು :)

ಆದರೆ ಕಲೆಗಾರರೆಲ್ಲರು ಬ್ಲಾಗುವುದಿಲ್ಲ,
ಬ್ಲಾಗುವವರೆಲ್ಲ ಕಲೆಗಾರರಲ್ಲ.

ಅಂದಹಾಗೆ, ಎಲ್ಲಿ ಆ ಕಲೆಗಾರ??
ಎಲ್ಲಿ ಬ್ಲಾಗುತ್ತಾನವನು?

 
At 5:01 AM, Blogger admin said...

ಬ್ಲಾಗುವನುಕ್ಕಿಂತ ಬಾಲಗುವನು ಎನ್ನಿ. ನನ್ನ ಬಾಲಗವನ್ನೂ ಕೊಂಚ ನೋಡಿ.

 
At 12:58 PM, Blogger Enigma said...

:) sogasagide vachana/kaggagalu

 

Post a Comment

<< Home