ತೋಚಿದ್ದು ಗೀಚುವ ಈ ಮನ....
ಮದುವೆಯೆಂಬುದು ಆಳವರಿಯದ ಗುಂಡಿ,
ಬಿದ್ದೀರಿ ಜೋಕೆ !!
ಬಿದ್ದನೋ ನಂಬಾವ,
ನೋಡಿ ಕಲಿಯಿರೋ !!
Congrats BAAVS !!!!
These are for you BAAVS.............
ಏ ನನ್ನ ಹುಡುಗಿ..
ಕಣ್ಣ ಕೂರಂಬುಗಳಿಂದ ಹೃದಯ ಚುಚ್ಚುವೆಯೇಕೆ?
ತುಟಿಯಂಚಿನಾ ನಗೆಯಿಂದ ಕಿಚ್ಚ ಹಚ್ಚುವೆಯೇಕೆ?
ಮೌನದಾ ಧಗೆಯಲ್ಲಿ ನನ್ನ ಉರಿಸುವೆಯೇಕೆ?
ಹೂಂ ಎನ್ನಲಾರೆಯಾ ನನ್ನ ಮಾಟಗಾತೀ?....
ಬಾವ ಹೇಗೆ ಕರೆಯುತ್ತಾನೆ..
ಬಾವ ಈಗ ಕರೆಯುತ್ತಾನೆ ಏ ರಂಭಾ....
ಆಗ ಕರೆಯುತ್ತಿದ್ದ.. ಏ RUM ಬಾ....
ಬೊಗಸೆಗಣ್ಗಳ ಹುಡುಗಿ..
ಮದುವೆಯಾಗುವೆ ನಿನ್ನ, ಬೊಗಸೆಗಣ್ಗಳ ಹುಡುಗಿ..
ಜೊತೆಗೆ ನಡೆವೆಯ ಬದುಕಿನಾ ಗಮ್ಯ ಹುಡುಕಿ..
ಕಷ್ಟ ನನಗಿರಲಿ, ಕನಸೊಂದ ಹಂಚಿಕೋ..
ಗೆದ್ದು ಬರುವೆನು ನೋಡು, ವಿಧಿಯನೂ ತಡಕಿ....
ಪುಟ್ಟ ಆಸೆ....
ನಕ್ಕಾಗ ಕೆನ್ನೆಗುಳಿಗಳ ನೋಡುವಾಸೆ..
ಮುನಿಸಿನಲಿ ಸಂಪಿಗೆಯ ಕೆಂಪು ನಾಸಿಕವ ನೋಡುವಾಸೆ..
ಆಳುವಿನಲಿ ಉದುರಿದ ಕಣ್ಮುತ್ತುಗಳ ಹಿಡಿದಿಡುವಾಸೆ..
ದಂತಬಣ್ಣದ ಶಂಖಗೊರಳಿಗೆ ಕದ್ದು ಮುತ್ತಿಡುವಾಸೆ..
ಮುಂಗುರುಳ ಮಲ್ಲಿಗೆಯ ಘಮವ ಕಣ್ಮುಚ್ಚಿ ಆಸ್ವಾದಿಸುವಾಸೆ..
ಗಲ್ಲ ಹಿಡಿದೆತ್ತಿದಾಗ ಕಣ್ಣಿನಾ ನಾಚಿಕೆಯ ಕಣ್ತುಂಬಿಕೊಳ್ಳುವಾಸೆ..
2 Comments:
This comment has been removed by a blog administrator.
Too Good man... Keep going...
Post a Comment
<< Home