ಧಿಯೋ ಯೋನಃ ಪ್ರಚೋದಯಾತ್....: November 2006

ಧಿಯೋ ಯೋನಃ ಪ್ರಚೋದಯಾತ್....

Wednesday, November 22, 2006

Time Pass.......

ನಿನ್ನ ಕೊರಳುಲಿಯ ರಾಗವಿದು,
ನಿನ್ನ ಕದಪುಗಳ ರಂಗು ಇದು,
ನಿನ್ನ ಬೊಗಸೆಗಣ್ಗಳ ಕಾಂತಿಯಿದು,
ಆ ನಾಟ್ಯದಾ ಮುಂಗುರುಳ ಲಾಸ್ಯವಿದು,
ಆ ಹಂಸನಡಿಗೆಯ ಲಾವಣ್ಯವಿದು,
ಕೊಲಬೇಡ ಜಾಣೆ..ನನ್ನ ಹೃದಯವಿದು....

ಮುತ್ತೋಡಿ ಟ್ರಿಪ್ ಬಗ್ಗೆ ಸದ್ಯದಲ್ಲೇ ಬರೆಯುತ್ತೇನೆ ( with photos !!!!)....

Wednesday, November 15, 2006

Its Bad.. :(

I'm facing problem in posting to my other blog page

Monday, November 06, 2006

ತೋಚಿದ್ದು ಗೀಚುವ ಈ ಮನ....


ಮದುವೆಯೆಂಬುದು ಆಳವರಿಯದ ಗುಂಡಿ,
ಬಿದ್ದೀರಿ ಜೋಕೆ !!
ಬಿದ್ದನೋ ನಂಬಾವ,
ನೋಡಿ ಕಲಿಯಿರೋ !!
Congrats BAAVS !!!!


These are for you BAAVS.............

ಏ ನನ್ನ ಹುಡುಗಿ..

ಕಣ್ಣ ಕೂರಂಬುಗಳಿಂದ ಹೃದಯ ಚುಚ್ಚುವೆಯೇಕೆ?
ತುಟಿಯಂಚಿನಾ ನಗೆಯಿಂದ ಕಿಚ್ಚ ಹಚ್ಚುವೆಯೇಕೆ?
ಮೌನದಾ ಧಗೆಯಲ್ಲಿ ನನ್ನ ಉರಿಸುವೆಯೇಕೆ?
ಹೂಂ ಎನ್ನಲಾರೆಯಾ ನನ್ನ ಮಾಟಗಾತೀ?....


ಬಾವ ಹೇಗೆ ಕರೆಯುತ್ತಾನೆ..

ಬಾವ ಈಗ ಕರೆಯುತ್ತಾನೆ ಏ ರಂಭಾ....
ಆಗ ಕರೆಯುತ್ತಿದ್ದ.. ಏ RUM ಬಾ....


ಬೊಗಸೆಗಣ್ಗಳ ಹುಡುಗಿ..

ಮದುವೆಯಾಗುವೆ ನಿನ್ನ, ಬೊಗಸೆಗಣ್ಗಳ ಹುಡುಗಿ..
ಜೊತೆಗೆ ನಡೆವೆಯ ಬದುಕಿನಾ ಗಮ್ಯ ಹುಡುಕಿ..
ಕಷ್ಟ ನನಗಿರಲಿ, ಕನಸೊಂದ ಹಂಚಿಕೋ..
ಗೆದ್ದು ಬರುವೆನು ನೋಡು, ವಿಧಿಯನೂ ತಡಕಿ....


ಪುಟ್ಟ ಆಸೆ....

ನಕ್ಕಾಗ ಕೆನ್ನೆಗುಳಿಗಳ ನೋಡುವಾಸೆ..
ಮುನಿಸಿನಲಿ ಸಂಪಿಗೆಯ ಕೆಂಪು ನಾಸಿಕವ ನೋಡುವಾಸೆ..
ಆಳುವಿನಲಿ ಉದುರಿದ ಕಣ್ಮುತ್ತುಗಳ ಹಿಡಿದಿಡುವಾಸೆ..
ದಂತಬಣ್ಣದ ಶಂಖಗೊರಳಿಗೆ ಕದ್ದು ಮುತ್ತಿಡುವಾಸೆ..
ಮುಂಗುರುಳ ಮಲ್ಲಿಗೆಯ ಘಮವ ಕಣ್ಮುಚ್ಚಿ ಆಸ್ವಾದಿಸುವಾಸೆ..
ಗಲ್ಲ ಹಿಡಿದೆತ್ತಿದಾಗ ಕಣ್ಣಿನಾ ನಾಚಿಕೆಯ ಕಣ್ತುಂಬಿಕೊಳ್ಳುವಾಸೆ..

ದೀಪಾವಳಿ ಹಬ್ಬವಿದೋ ಕಾಣಾ....

Well, ಹೇಳುವುದು ಬೇಕಾದಷ್ಟಿದೆ.... ಆದ್ರೆ, why to ಪಿಟೀಲು ಕುಯ್ಯೋದು?.... Let me shorten whole things from Biking to sagar for ದೀಪಾವಳಿ..

ಬಾವ, ಡಿಂಕಿ, ನಾನು, ನಾಡಿ & ನಾಗ..... ofcource, ಸುಮಂತ (how i can foret :) hehehe ).....
ನಾಗನ ಬೈಕು ಕೈಕೊಟ್ಟಿದ್ದು.... ಗುಬ್ಬಿ ತನಕ ನಾನು ಡಿಂಕಿ, ಅರಸಿಕೆರೆಯಿಂದ ಸ್ವಲ್ಪ ದೂರದವರೆಗೆ ನಾನು ಬಾವ.... ಅಲ್ಲಿಂದ ಕೆಸರುಗದ್ದೆ ಬೈಕಿಂಗ್.... M.H. ಮಳೆ.. M.C ಹಳ್ಳಿಲಿ ಬಿಸಿಬಿಸಿ ಕಾಪಿ.. ಚಟ್ನಳ್ಳಿಲಿ ಸುಮಂತನ ಒಲೆ.... ಬೆಂಕಿ ಕಾಸಿದ್ದು.. ಶಿವಮೊಗ್ಗದಿಂದ ನಾನು ಬಾವ ರಥೊತ್ಸವ.... 120 ಮುಟ್ಸಿದ್ದು.... ಕುಂಸಿ ಕ್ರಾಸ್ ನಲ್ಲಿ ಎದುರಿಗೆ ಬಸ್ಸು.. ಎಂಟಾಗೋ ಸೀನು.. ಆನಂದಪುರದ ಹತ್ತಿರ ಅಮೋಘವಾಗಿ ಮತೊಂದ್ಸಲ.... ಹೆದ್ರಿಕ್ಯಂಡು ಬಾವಂಗೆ ಬೈಕ್ ದಾಟ್ಸಿದ್ದು.. ಸಾಗರದಲ್ಲಿ ಹೆಲ್ಮೆಟ್ ವಿಲೇವಾರಿ.... ಮನೆಗೆ ಸುಮಂತನ ಜೊತೆಗೆ :( .. ಮನೆಲಿ ಎಲ್ಲರಿಗೂ ಹತ್ಸಿದ್ದು.. ಸಂಜೆ ಮನೆಯೊಟ್ಟಿಂದ M.H. ಕ್ಲಾಸು.. ಅದಲ್ದೇ ಸಂಬಂಧಿಕರಿಂದ ಫೋನ್ ನಲ್ಲಿ ಬೈಗುಳ.. ತಪ್ಪೊಪ್ಪಿಗೆ.. ಅಮ್ಮ ಇಡೀ ಒಂದಿನ ಮಾತು ಬಿಟ್ಟಿದ್ದು.. ರಾಜಿ ಪಂಚಾಯಿತಿಗೆ.. ಇನ್ ಹಂಗ್ ಮಾಡದಿಲ್ಲೆ.. ನಡಹಳ್ಳಿ ಭೇಟಿ.. ಮಧ್ಯಾಹ್ನ ಸೂಪರ್ ಊಟ.. ದೊಡ್ಡಪ್ಪನಿಂದ ಬುದ್ಧಿವಾದ.. ನಾನು ನರಹರಿ ಅಣ್ಣ ಹಗುರ ಹರಟೆ.. ಹರ್ಷನ ಮನೆ.. ಅಪ್ಪನ ಡೈಲಾಗು.. ಬಾಯಿ ಬಂದ್.. ಗೋಪೂಜೆ.. ಹೋಳಿಗೆ ಊಟ.. ಹಬ್ಬ ಕಳ್ಸಿದ್ದು.. ಒಂದೂವರೆ ಗಂಟೆ ಬಾಣ-ಬಿರುಸುಗಳ ಪ್ರದರ್ಶನ.... ಅಜ್ಜನ ಮನೆ.. ಹೋಳಿಗೆ ಊಟ.. ರಾತ್ರಿ, ಮರಳಿ ಬೆಂಗಳೂರೆಂಬ ಗೊಬ್ರಗುಂಡಿಗೆ....